ಆರೋಗ್ಯ ಸೂತ್ರ

ಆರೋಗ್ಯ ಸೂತ್ರ

 ಆರೋಗ್ಯ ಸೂತ್ರ

ನಮ್ಮ ಶರೀರ ಎಂಬ ಮನೆಯ ಆರೋಗ್ಯದ ರಕ್ಷಣೆಗೂ ಒಂದು ರಕ್ಷಣಾ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆಯ ಹೆಸರೇ “ರೋಗ ನಿರೋಧಕ ಶಕ್ತಿ”

ರೋಗ ನಿರೋಧಕ ಶಕ್ತಿಯ ಪೋಷಣೆ ಅತ್ಯಗತ್ಯ. ನಾವು ಆರೋಗ್ಯವಾಗಿರಲು ನಮ್ಮ ಶರೀರದ ರೋಗನಿರೋಧಕ ಶಕ್ತಿಯ ವ್ಯವಸ್ಥೆ  ಒಂದು ಸಂಪೂರ್ಣ ವ್ಯವಸ್ಥೆಯಾಗಿದೆ. ಇದು ಕೆಲಸ ಮಾಡುವ ರೀತಿ ಆಧುನಿಕ ವಿಜ್ಞಾನಿಗಳಿಗೆ, ವೈದ್ಯರಿಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ.

3000 ಸಾವಿರ ವರ್ಷಗಳ ಹಿಂದೆಯೇ ಮಹರ್ಷಿ ಪತಂಜಲಿಯ ಶಿಷ್ಯರಾದ ಮಹರ್ಷಿ ವಾಗ್ಬಾಟರು ಸಾವಿರಾರು ಸೂತ್ರಗಳನ್ನು ನೀಡಿದ್ದಾರೆ. ಅವು ಯಾವುವೆಂದರೆ:

1. ನಾವು ಯಾವ ಪ್ರದೇಶದಲ್ಲಿ ವಾಸಿಸುತ್ತಿದ್ದಿರೋ ಅಲ್ಲಿಯ ಪರಿಸರ ವಾತಾವರಣಕ್ಕೆ ತಕ್ಕ ರೀತಿಯ ಜೀವನ ಶೈಲಿಯನ್ನು ಅನುಸರಿಸಿ

2. ನೀರನ್ನು ಯಾವಾಗಲೂ ಕುದಿಯುತ್ತಿರಬೇಕು

3. ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ನೀರು ಖಂಡಿತ ಬೇಡ

4. ಊಟ ಮಾಡುವಾಗ ಮಧ್ಯ ಮಧ್ಯದಲ್ಲಿ ನೀರು ಕುಡಿಯಬಾರದು

5. ಬೆಳಗ್ಗಿನ ಉಪಹಾರವನ್ನು ತಪ್ಪಿಸಬಾರದು

6. ಊಟ ಮಾಡಿದ ಕೂಡಲೇ ನೀರು ಮಜ್ಜಿಗೆ ಕುಡಿಯಬೇಕು

7. ಬಿಸಿ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಕೋಬಿನಾಂಶ ಕಡಿಮೆಯಾಗುತ್ತದೆ

8. ಬೆಳಿಗ್ಗೆ ಎದ್ದ ಕೂಡಲೇ ಎರಡು ಲೋಟ ಬಿಸಿ ನೀರು ಕುಡಿಯಿರಿ

9. ಪ್ರತಿ ದಿನ ಎಂಟು ತಾಸು ನಿದ್ದೆ ಮಾಡಿ

ಜೀವನ ಶೈಲಿಯು ತುಂಬಾ ಮುಖ್ಯವಾಗಿರುತ್ತದೆ. ವೈಯಕ್ತಿಕ ನಿರ್ಧಾರಗಳ ಒಟ್ಟು ಗೂಡುವಿಕೆಯ ಅನಾರೋಗ್ಯ ಅಥವಾ ಸಾವಿನ ಕಾರಣ ಆಗಬಹುದು, ಪರಿಸರವು ನಮ್ಮ ಆರೋಗ್ಯವನ್ನು ಬದಲಾಯಿಸಬಹುದು. ಮಾನವನಿಗೆ ಸ್ವಲ್ಪ ಅಥವಾ ಯಾವುದೇ ನಿಯಂತ್ರಣ ಹೊಂದಿರುವ ವಿಷಯಗಳಿಂದ ದೇಹಕ್ಕೆ ಮತ್ತು ವೈಯಕ್ತಿಕವಾಗಿ ಮನಸ್ಸಿನ ಆರೋಗ್ಯಕ್ಕೆ ಹಾನಿಯಾಗಬಹುದು.

ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಸಮರ್ಥತೆ ಇರಬೇಕು, ತಿನ್ನುವ ಅಥವಾ ಮಲಗುವ ಮಾದರಿಗಳನ್ನು ಗುರುತಿಸಬೇಕು, ಮಾನಸಿಕ ಅಸ್ವಸ್ಥತೆಯ ಆಲೋಚನೆಗಳನ್ನು ಮಾಡಬಾರದು.  ಮಧ್ಯಪಾನ, ಧೂ ಮಾಡಬಾರದು.

ಉತ್ತಮ ಆರೋಗ್ಯಕ್ಕೆ ದೈಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. ಮನಸ್ಸು ಮತ್ತು ದೇಹಕ್ಕೆ ಸೂಕ್ತವಾಗಿ ರುವುದನ್ನು ನಾವು ಮಾಡಬೇಕು. 

ನಮ್ಮ ಜೀವನ ಶೈಲಿ ಮತ್ತು ಅಭ್ಯಾಸಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಈಗೆ ಮಾಡುವುದರಿಂದ ಧೀರ್ಘಕಾಲದ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

ಆರೋಗ್ಯವೇ ಭಾಗ್ಯ….

Bhavya R J

error: Content is protected !!