ನಿಮ್ಮ ಅಂಗೈಗಳು ಬೆವರುತ್ತಿವೆಯಾ ,ಹಾಗಾದರೆ ಪರಿಹಾರ ಇಲ್ಲಿದೆ ನೋಡಿ
ಆತಂಕ, ಒತ್ತಡ ಮತ್ತು ಹೆದರಿಕೆ ಮತ್ತು ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಿಮ್ಮ ಅಂಗೈಗಳು ಬೆವರುವುದು ನೀವು ಗಮನಿಸರಬಹುದು ,ಒತ್ತಡ ಆತಂಕ ಮತ್ತು ಹೆದರುವಿಕೆ ಉಂಟಾದಾಗ ದೇಹದ ಹಾರ್ಮೋನುಗಳು ಕ್ರಿಯೆ ಪ್ರತಿಕ್ರಿಯೆಯ ಸಂದರ್ಭದಲ್ಲಿ ಕಾರ್ಟಿಸೋಲ್ ಮತ್ತು ಎಪಿನ್ಫ್ರಿನ್ ಅನ್ನು ಬಿಡುಗಡೆ ಮಾಡುತ್ತದೆ ಈ ಹಾರ್ಮೋನುಗಳು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಸಹಜವಾಗಿ, ನಿಮ್ಮ ದೇಹವು ನಿಮ್ಮ ತಾಪಮಾನವನ್ನು ನಿಯಂತ್ರಿಸುವ ಸಲುವಾಗಿ ಬೆವರನ್ನು ಹೊರ ಹಾಕುತ್ತದೆ .
ಹಾಗಾದರೆ ಬೆವರುವ ಅಂಗೈಗಳಿಗೆ ಪರಿಹಾರವೇನು?
ಬೆವರುವ ಅಂಗೈಗಳಿಗೆ ಪರಿಪೂರ್ಣ ಚಿಕಿತ್ಸೆ ಇಲ್ಲದಿದ್ದರೂ ಅದನ್ನು ನಿಯಂತ್ರಣ ಮಾಡಲು ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ
•ಆಂಟಿಪೆರ್ಸ್ಪಿರಂಟ್ ಲೋಷನ್
ಆಂಟಿಪೆರ್ಸ್ಪಿರಂಟ್ ಬೆವರುವಿಕೆಯನ್ನು ನಿಯಂತ್ರಿಸಲು ಸುಲಭವಾದ ಮಾರ್ಗವಾಗಿದೆ. ಇದು ನಾನಾ ರೀತಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಲೋಷನ್ಗಳನ್ನೂ ಹಚ್ಚುವುದು ಹೆಚ್ಚು ಪರಿಣಾಮಕಾರಿಯಾಗಿದೆ ಇದನ್ನು ಬಳಸುವುದರಿಂದ ನೀವು ತಕ್ಕ ಮಟ್ಟಿಗೆ ಅಂಗೈ ಬೆವರುವಿಕೆಯಿಂದ ದೂರವಿರಬಹುದು.
•ಬೇಬಿ ಪೌಡರ್
ಬೇಬಿ ಪೌಡರ್ ದ್ರವವನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ ಆದ್ದರಿಂದ ಯಾವುದಾದರೂ ಕಾರ್ಯಕ್ರಮದ ಮೊದಲು ನೀವು ಇದನ್ನು ಬಳಸಿದರೆ ಬೆವರನ್ನು ತಡೆಯಬಹುದು
ಇದಕ್ಕಾಗಿ ನೀವು ಚಿಕ್ಕ ಗಾತ್ರದ ಬಾಟಲಿಯಲ್ಲಿ ಪೌಡರ್ ನಿಮ್ಮ ಜೊತೆ ಇರಿಸಿಕೊಳ್ಳುವುದು ಒಳ್ಳೆಯದು.
•ನೀರು ಕುಡಿಯುವುದು
ಬೆವರುವ ಅಂಗೈಗಳನ್ನೂ ನೈಸರ್ಗಿಕವಾಗಿ ನಿಲ್ಲಿಸುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದ ತಾಪಮಾನವು ಕುಗ್ಗುತ್ತದೆ ಮತ್ತು ಅತಿಯಾದ ಬೆವರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
•ಉತ್ತಮ ಆಹಾರ ಕ್ರಮ
ನೀವು ಬೆವರುವ ಕೈಗಳ ಚಿಕಿತ್ಸೆಗಾಗಿ ಹುಡುಕುತ್ತಿದ್ದರೆ, ಆಹಾರವು ಅತ್ಯುತ್ತಮ ಔಷಧಿಯಾಗಿದೆ.ಆರೋಗ್ಯಕರ ಆಹಾರ ದೇಹದ ಸಮತೋಲನ ಮತ್ತು ಆರೋಗ್ಯಕ್ಕೆ ಕಾರಣವಾಗುತ್ತದೆ.
ಆಲ್ಕೊಹಾಲ್ ,ಮಸಾಲೆಯುಕ್ತ ಪದಾರ್ಥ ,ಕೊಬ್ಬಿನ ಅಂಶವಿರುವ ಆಹಾರ,ಮತ್ತು ಎಣ್ಣೆಯಲ್ಲಿ ಕರಿದ ಆಹಾರ ತಪ್ಪಿಸುವುದರಿಂದ ನಿಮ್ಮ ದೇಹದಲ್ಲಿ ಸಮತೋಲನ ತರಬಹುದು ಮತ್ತು ಬೆವರುವಿಕೆ ಕಮ್ಮಿ ಮಾಡಿಕೊಳ್ಳಲು ಸಹಾಯ ಆಗಬಹುದು.
•ಸಾವಯವ ರೋಸ್ ವಾಟರ್
ಸಾವಯವ ರೋಸ್ ವಾಟರ್ ಬೆವರುವಿಕೆ ಕಮ್ಮಿ ಮಾಡುವುದಕ್ಕೆ ಉತ್ತಮ ವಿಧಾನ ,ಹತ್ತಿ ಉಂಡೆಯನ್ನು ಅದರಲ್ಲಿ ಅದ್ದಿ, ಹತ್ತಿ ಉಂಡೆಯನ್ನು ನಿಮ್ಮ ಅಂಗೈಗಳ ಮೇಲೆ ಉಜ್ಜಿಕೊಳ್ಳಿ ಮತ್ತು ಒಣಗಲು ಬಿಡಿ ಇದರಿಂದ ಬೆವರುವಿಕೆ ಪ್ರಮಾಣ ಕಮ್ಮಿಯಾಗುತ್ತದೆ.
•ತೆಂಗಿನ ಎಣ್ಣೆ
ನಿಮ್ಮ ದೈನಂದಿನ ಸ್ನಾನದ ನಂತರ, ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಅಂಗೈಗಳ ನಡುವೆ ಸಂಪೂರ್ಣವಾಗಿ ಲೇಪಿಸಿ ಉಜ್ಜಿಕೊಳ್ಳಿ. ತೆಂಗಿನ ಎಣ್ಣೆಯು ನೈಸರ್ಗಿಕ ಆಂಟಿಪೆರ್ಸ್ಪಿರಂಟ್ ಆಗಿದೆ, ಮತ್ತು ಇದು ಚರ್ಮಕ್ಕೆ ಸಂಬಂಧಿಸಿದ ಹಲವಾರು ಪ್ರಯೋಜನಗಳನ್ನು ಹೊಂದಿದೆ.ನೈಸರ್ಗಿಕವಾಗಿ ಇದು ಅಂಗೈಗಳನ್ನೂ ಮೃದುವಾಗಿ ಕೂಡ ಇಡುತ್ತದೆ
•ವ್ಯಾಯಾಮ
ಅಂಗೈ ಬೆವರುವಿಕೆ ತಡೆಯಲು ವ್ಯಾಯಾಮ ಒಂದು ಮನೆಮದ್ದು ,ವ್ಯಾಯಾಮ ಮಾಡುವುದರಿಂದ ದೇಹವು ಸಮತೋಲನವಾಗಿರುತ್ತದೆ .ವ್ಯಾಯಾಮ ಮಾಡುವುದರಿಂದ ದೇಹದ ಉಷ್ಣಾಂಶತೆ ಕಡಿಮೆಯಾಗುತ್ತದೆ.
ಹೀಗೆ ಹಲವಾರು ವಿಧಾನಗಳನ್ನು ಬಳಸುದರಿಂದ ನೈಸರ್ಗಿಕ ವಾಗಿ ನೀವು ನಿಮ್ಮ ಅಂಗೈ ಬೇವರುವುದರಿಂದ ತಪ್ಪಿಸಿಕೊಳ್ಳಬಹುದು
Mohammad shareef