ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯು ದುರ್ಬಲಗೊಳ್ಳುತ್ತಿದೆ, ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಅಧಿಕಾರದ ದುರುಪಯೋಗದಿಂದ ಪ್ರತಿಯೊಂದು ವಿಭಾಗಗಳಲ್ಲಿಯೂ ನಂಬಿಕೆಯೂ ಕುಗ್ಗಿಸುತ್ತದೆ ಅಷ್ಟೇ ಅಲ್ಲ ಭ್ರಷ್ಟಾಚಾರವು ರಾಷ್ಟ್ರದ ಆರ್ಥಿಕ ಬೆಳವಣಿಗೆಯನ್ನು ತಡೆಯುತ್ತದೆ ಭ್ರಷ್ಟಾಚಾರವು ನೈತಿಕತೆ ಅಥವಾ ಜ್ಞಾನದ ಕೊರತೆಯಿಂದ ಉಂಟಾಗುವುದಿಲ್ಲ ವ್ಯಾಮೋಹದಿಂದ ಭ್ರಷ್ಟಾಚಾರಗಳು ಉಂಟಾಗುತ್ತವೆ.
ಭ್ರಷ್ಟಾಚಾರ ಎಂದರೇನು
ಭ್ರಷ್ಟಾಚಾರವು ಅಧಿಕಾರದ ಸ್ಥಾನದಲ್ಲಿರುವವರ ಆಕ್ರಮಾಣಿಕ ವರ್ತನೆಯಾಗಿದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು, ವೈಯಕ್ತಿಕ ಲಾಭಕ್ಕಾಗಿ ಒಬ್ಬರು ತಮಗೆ ವಹಿಸಿಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಾಗ ಭ್ರಷ್ಟಾಚಾರವು ಸಂಭವಿಸುತ್ತದೆ.
ಭಾರತದಲ್ಲಿ ಭ್ರಷ್ಟಾಚಾರವು ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸರ್ಕಾರಿ ಏಜೆನ್ಸಿಗಳ ಆರ್ಥಿಕತೆಯ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುವ ಸಮಸ್ಯೆಯಾಗಿದೆ.
2021 ಅಲ್ಲಿ ಅವರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ 180 ರಲ್ಲಿ 85ನೇ ಸ್ಥಾನದಲ್ಲಿ ದೇಶವನ್ನು ಶ್ರೇಣಿಕರಿಸಿದೆ ಅಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕದ ದೇಶಗಳು ಅತ್ಯಂತ ಪ್ರಾಮಾಣಿಕ ಸಾರ್ವಜನಿಕ ವಲಯವನ್ನು ಹೊಂದಿವೆ.
ಭ್ರಷ್ಟ ಭಾರತೀಯ ನಾಗರಿಕನು ಸ್ವಿಸ್ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪಗಳನ್ನು ಮಾಧ್ಯಮಗಳು ವ್ಯಾಪಕವಾಗಿ ಪ್ರಕಟಿಸಿವೆ.
ಭ್ರಷ್ಟಾಚಾರವು ಒಂದೇ ಕಡೆ ಸಂಭವಿಸದೆ ಎಲ್ಲಿ ಬೇಕಾದರೂ ಸಂಭವಿಸಬಹುದು; ವ್ಯಾಪಾರ, ಸರ್ಕಾರ ,ನ್ಯಾಯಾಲಯಗಳು, ಮಾಧ್ಯಮಗಳು, ಮತ್ತು ನಾಗರಿಕ ಸಮಾಜದಲ್ಲಿ, ಹಾಗೆಯೇ ಆರೋಗ್ಯ ಮತ್ತು ಶಿಕ್ಷಣದಿಂದ, ಮೂಲ ಸೌಕರ್ಯ ಮತ್ತು ಕ್ರೀಡೆಗಳ ವರೆಗೆ ಎಲ್ಲಾ ಕ್ಷೇತ್ರಗಳಲ್ಲಿ
ಭ್ರಷ್ಟಾಚಾರವು ಯಾರನ್ನಾದರೂ ಒಳಗೊಳ್ಳಬಹುದು:
ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳು ,ಸಾರ್ವಜನಿಕ ಸೇವಕರು,ವ್ಯಾಪಾರಸ್ಥರು, ಅಥವಾ ಸಾರ್ವಜನಿಕ ಸದಸ್ಯರು ಬ್ಯಾಂಕರ್ ಗಳು, ವಕೀಲರು, ಅಕೌಂಟೆಂಟ್ ಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಗಳು ಅಪಾರದರ್ಶಕ ಹಣಕಾಸು ವ್ಯವಸ್ಥೆಗಳು ಮತ್ತು ಅನಾಮಧೇಯ ಶೆಲ್ ಕಂಪನಿಗಳಂತಹ ವೃತ್ತಿಪರ ಸಹಾಯಕರ ಸಹಾಯದಿಂದ ಭ್ರಷ್ಟಾಚಾರವು ನೆರಳಿನಲ್ಲಿ ನಡೆಯುತ್ತದೆ. ಭ್ರಷ್ಟಾಚಾರ ಪ್ರತಿಯೊಂದು ಕ್ಷೇತ್ರದಲ್ಲೂ ಕಂಡು ಬರುತ್ತಿರುವಂತಹ ಸುದ್ದಿಯಾಗಿದೆ ಭಾರತದಲ್ಲಿ ಎಷ್ಟೋ ಹಗರಣಗಳನ್ನು ಬೆಳಕಿಗೆ ಬಂದಿರುವುದು ನಾವು ನೋಡಬಹುದು.
ಭ್ರಷ್ಟಾಚಾರ ಅರಾಜಕತೆ ಅನಕ್ಷರತೆ, ಅದಕ್ಷತೆ ರಾಜಕೀಯ ಬಿಕ್ಕಟ್ಟು, ಬಡತನ, ಅನಾರೋಗ್ಯ, ಕಳಪೆ ಜೀವನ ಮಟ್ಟ, ಆರ್ಥಿಕ ಅಸ್ಥಿರತೆ, ದರೋಡೆ, ಲೈಂಗಿಕತೆ,ಹೀಗೆ ಹಲವು ಹಗರಣಗಳು ಒಂದು ದೇಶದಲ್ಲಿನ ಅತಿ ಕೆಟ್ಟ ಸಂಗತಿಗಳಾಗಿವೆ. ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಹಗರಣಗಳಿಗೆ ಭಾರತದಲ್ಲಿ ಬರಗಾಲವಿಲ್ಲ ಇಂತಹ ನೂರಾರು ಹಗರಣಗಳು ದೇಶವನ್ನು ತಲ್ಲಣ ಗೊಳಿಸಿದೆ, ಸ್ವಾತಂತ್ರ ಪೂರ್ವದ ಸ್ಥಿತಿ ಒಂದು ರೀತಿಯಾದರೆ ಸ್ವಾತಂತ್ರ ನಂತರದ್ದು ಇನ್ನೊಂದು ಪರಿಸ್ಥಿತಿ ಭ್ರಷ್ಟಾಚಾರ ಹಗರಣಗಳು ಬಿಟ್ಟರು ಬಿಡದೆ ಬೆಂಬೂತವಾಗಿ ನಮ್ಮನ್ನು ಕಾಡುತ್ತಲೆ ಇವೆ, ಇನ್ನಷ್ಟು ಹೆಮ್ಮರವಾಗಿ ಬಲಿಷ್ಠವಾಗಿ ಅಧಿಕಾರ ಶಾಹಿ ಮತ್ತು ಬಂಡವಾಳ ಶಾಹಿಗಳ ದುರುಪಯೋಗದ ರೂಪವಾಗಿ ದೇಶದ ಆರ್ಥಿಕತೆಗೆ ಕೊಡಲಿ ಪೆಟ್ಟು ನೀಡಿದೆ ನೀಡಿದೆ.
1. ಕಲ್ಲಿದ್ದಲು ಹಗರಣ
2. 2ಜಿ ಸ್ಪೇಕ್ಟ್ರಂ ಹಗರಣ
3. ವಾಕ್ ಮಂಡಳಿ ಭೂ ಹಗರಣ
4. ಕಾಮನ್ವೆಲ್ತ್ ಹಗರಣ
5. ತೆಲಗಿ ಹಗರಣ
6. ಸತ್ಯಂ ಹಗರಣ
7. ಬೊಫೋರ್ಸ್ ಹಗರಣ
8. ಮೇವು ಹಗರಣ
9. ಹವಾಲ ಹಗರಣ
10. ಹರ್ಷದ ಮೇಹತ-ಕೇತನ್ ಫರೆಕ ಹಗರಣ
ಇವುಗಳು ಭ್ರಷ್ಟಾಚಾರದಲ್ಲಿ ಕಂಡು ಬಂದಿರುವಂತದ್ದು.
ಹಾಗಾದರೆ ಭ್ರಷ್ಟಾಚಾರ ತಡೆಯುವುದು ಹೇಗೆ..?
ಅನಿಯಂತ್ರಿತವಾಗಿ ಹೋದರೆ ಸಮುದಾಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಲೇ ಇರುತ್ತದೆ ಆದ್ದರಿಂದ ಅಕ್ರಮ ಹಣ ವರ್ಗಾವಣೆಯಂತಹ ಕಡ್ಡಾಯ ಶಿಕ್ಷಣ ಕೋರ್ಸ್ ಗಳನ್ನು ಪರಿಚಯಿಸಬೇಕು. ನಿರ್ವಹಣಾ ವಿಭಾಗದ ಹಿರಿಯ ಉದ್ಯೋಗಿಗಳು ಉದಾಹರಣೆಯ ಮೂಲಕ ಮುನ್ನಡೆಸಬೇಕು ಮತ್ತು ಮುಕ್ತ ಮತ್ತು ಪಾರದರ್ಶಕ ಸಂಸ್ಕೃತಿಯನ್ನು ಬೆಳಸಿಕೊಳ್ಳಬೇಕು, ಇದಲ್ಲದೆ ಹೊಣೆಗಾರಿಕೆಯ ಕಾರ್ಯವಿಧಾನಗಳು ಭ್ರಷ್ಟಾಚಾರವನ್ನು ನಿಗ್ರಹಿಸಲು ಸಹ ಸಹಾಯ ಮಾಡಬಹುದು, ಇದು ನೈತಿಕ ಸಂಸ್ಕೃತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಇದಲ್ಲದೆ ವರದಿ ಮಾಡುವುದು ಸರಳವಾದರೆ ಭ್ರಷ್ಟಾಚಾರವನ್ನು ಕಡಿಮೆ ಮಾಡುವುದು ಸುಲಭವಾಗುತ್ತದೆ. ಉದ್ಯೋಗಿ, ಗ್ರಾಹಕರು ,ವ್ಯವಸ್ಥಾಪಕರು, ಅಥವಾ ಪೂರೈಕೆದಾರರಾಗಿದ್ದರು ಯಾವುದೇ ಭಯವಿಲ್ಲದೆ ಮುಕ್ತವಾಗಿ ವರದಿ ಮಾಡುವ ಹಕ್ಕನ್ನು ಯಾರಾದರೂ ಹೊಂದಿರಬೇಕು. ಮತ್ತೊಂದು ಪ್ರಮುಖ ಅಂಶವೆಂದರೆ ಅಧಿಕಾರದ ಸ್ಥಾನದಲ್ಲಿ ಇರಿಸುವ ಮೊದಲು ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ನಿಖರವಾದ ಹಿನ್ನೆಲೆ ಪರಿಶೀಲನೆ ನಡೆಸಬೇಕು.