ಸಾರ್ವಜನಿಕರಾದ ನಾವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಟೋಲ್ ಕಟ್ಟಬೇಕು ಎಂಬುದು ಸಾರ್ವಜನಿಕರ ಕರ್ತವ್ಯವೇ ಸರಿ, ಆದರೆ ಈ ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಬರುವಂಥ ಟೋಲ್ ನಲ್ಲಿ ಮಾತ್ರ ತೆಗೆದುಕೊಳ್ಳಬೇಕಾದ ತೇರಿಗೆಗಿಂತ ದುಪ್ಪಟ್ಟು ಹೆಚ್ಚು ವಸೂಲಿ ಮಾಡುತ್ತಿದ್ದಾರೆ.
ಇತರೆ ಟೋಲ್ ಗಳಲ್ಲಿ 150-200 ರೂಪಾಯಿ ತೆಗೆದುಕೊಂಡರೆ, ಈ ಟೋಲ್ ನಲ್ಲಿ ಮಾತ್ರ ಒಂದು ವಾಹನದ ಮೇಲೆ 350 ರಿಂದ 920 ರೂ ವರೆಗೆ ವಸೂಲಿ ಮಾಡುತ್ತಿದ್ದಾರೆ. ಹಾಗಾದರೆ ಒಂದು ವಾಹನಕ್ಕೆ 920 ರಂತೆ ವಸೂಲಿ ಮಾಡುವುದಾದರೆ ಟೋಲ್ ಹೆಸರಲ್ಲಿ ಸರ್ಕಾರ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದೆ.
ಹಾಗಾದರೆ ಟ್ಯಾಕ್ಸ್ ಹೆಸರಲ್ಲಿ ಸರ್ಕಾರ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುವುದಾದರೆ ದಿನ ನಿತ್ಯದ ಕೆಲಸಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೊಡಾಡುವ ಸಾಮಾನ್ಯ ಜನರ ಕಷ್ಟವನ್ನು ಯಾರ ಬಳಿಯಲ್ಲಿ ಕೇಳಬೇಕು.